ಮೈಲಾರಯ್ಯ ಬಂದಾನಯ್ಯ

ಮೈಲಾರಯ್ಯ ಬಂದಾನಯ್ಯ ನಮ್ಮೂರಿಗೆ
ನಮ್ಮ ಹಿರಿಯೂರಿಗೆ ನಮ್ಮ ಸಿರಿಯೂರಿಗೆ
ತಂದಾನಿ ತಾನಿ ತಂದಾನೋ ||….

ಹಿರಿಯೂರ ನಡುಕಟ್ಟು ಬೇಲೂರ ಗೆಜ್ಜೆತಟ್ಟು
ಸಿರಿಯೂರ ಬಾಗ್ಲತಗ್ದು
ನಮ್ಮ ಸಿರಿಯೂರ ಬೆಳಗೌನೆ ಮೈಲಾರಯ್ಯ || ತಂದಾನಿ ||

ಮೈಲಾರಯ್ಯ ಬೆನ್ನನ್ನ ತಟ್ಟು ತವರೂರಿನ ಬೆನ್ನ ಹತ್ತು
ಸುಮ್ಮನೆ ಬಂದಿಲ್ಲವೊ ಮೈಲಾರಯ್ಯ
ಸುಗ್ಗಿಯ ತಂದ ಕಾಣಿರೋ || ತಂದಾನಿ ||

ಹೊನ್ನಿನ ಬಟ್ಲ ತಂದು ಮಣ್ಣಿನ ಹಾಡ ಹಾಡ್ಯಾನೆ
ಬತ್ತದ ತೊಟ್ಟ ತೂಗೌನೆ
ಬೆಳ್ಳಿಯ ರಥವ ತಂದೌನೆ || ತಂದಾನಿ ||

ಭಾರೀ ಚಪ್ಪರ ಹಾಕೌನೆ ತಂಗೀ ಮದ್ವೆ ಮಾಡೌನೆ
ಬೆಳ್ಳಿ ಹೂವಾನೆ ತಂದೌನೆ
ಆನಂದದ ಹೊಳೆಯ ಹರಸೌನೆ || ತಂದಾನಿ ||

ಮೈಲಾರಯ್ಯ ಬಂದಾನಯ್ಯ ನಮ್ಮೂರಿಗೆ
ನಮ್ಮ ಹಿರಿಯೂರಿಗೆ ನಮ ಸಿರಿಯೂರಿಗೆ
ತಂದಾನಿ ತಾನಿ ತಂದಾನೋ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಪಿ
Next post ಏಣಿ

ಸಣ್ಣ ಕತೆ

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

cheap jordans|wholesale air max|wholesale jordans|wholesale jewelry|wholesale jerseys